Posts

Showing posts from 2020

ಭದ್ರಮುಷ್ಟಿ

Image
ಭದ್ರಮುಷ್ಟಿ : ಹಿತ್ತಲ ಗಿಡ ಮದ್ದಲ್ಲವೆಂದು ಗಾದೆ ಮಾತಿದೆ.  ಹಾಗೇ ಆಯಿತು.  ಕೊರೋನ ಸಂದರ್ಭದಲ್ಲಿ ಅತೀ ಹೆಚ್ಚು ಪ್ರಚಾರದಲ್ಲಿ ಬಂದ ಸಸ್ಯ ಜಾತಿಯ ಹುಲ್ಲು ಭದ್ರಮುಷ್ಟಿ   ಇದು ನಮ್ಮ ಬದಿಕಾನದ ಅಂಗಳದಲ್ಲಿ ಸಾಕಷ್ಟಿವೆ.  ನೋಡುವುದಕ್ಕೆ ಸಾಧಾರಣ ಹುಲ್ಲು.  ಇಂತಹ ಜಾತಿಯ ಇದನ್ನೇ ಹೋಲುವ ಹುಲ್ಲು ನಮ್ಮ ಅಂಗಳದಲ್ಲಿ ಇನ್ನಷ್ಟು ಇವೆ.  ಆದರೆ ಭದ್ರಮುಷ್ಟಿಯನ್ನು ಸ್ವಲ್ಪ ಹುಡುಕಬೇಕಾಯಿತು.  ಮತ್ತೆ ನೋಡಿದರೆ ಅಂಗಳದಲ್ಲಿ ಎಲ್ಲಿ ನೋಡಿದರೂ ಅದೇ ಕಾಣಲು ಸುರುವಾಯಿತು. ಭದ್ರಮುಷ್ಟಿಯೆಂದು ಸಂಸ್ಕೃತದಲ್ಲಿ ಕರೆಯೋದು.  ಇದನ್ನು ಜೇಗಿನ ಗೆಡ್ಡೆ, ಕೊನ್ನಾರಿಗಡ್ಡೆ ಎಂದೂ ಹೇಳುತ್ತಾರೆ. ಇದರ ವೈಜ್ಞಾನಿಕ ಹೆಸರು  Cyperus rotundus .     ಜ್ವರ ನಿವಾರಣೆಯ ಗುಣವುಳ್ಳ ಭದ್ರಮುಷ್ಟಿ ಒಂದು ಔಷದೀಯ ಸಸ್ಯ.